ಪ್ರೊಫೆಸರ್ ರೊದ್ದಂ ನರಸಿಂಹ [೨೦ ಜುಲೈ ೧೯೩೩ - ೧೪ ಡಿಸೆಂಬರ್ ೨೦೨೦] ಅವರು ಭಾರತೀಯ ವೈಮಾನಿಕ ವಿಜ್ಞಾನಿ ಮತ್ತು ದ್ರವಚಲನ ಶಾಸ್ತ್ರಜ್ಞರು. ಅವರು ಹಿಂದೆ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವೈಮಾಂತರಿಕ್ಷ (ಏರೋಸ್ಪೇಸ್ ) ಇಂಜಿನೀಯರಿಂಗ್ ನ ಪ್ರಾಧ್ಯಾಪಕರೂ, ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿ () ನಿರ್ದೇಶಕರೂ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್(ನಿಯಾಸ್) ನ ನಿರ್ದೇಶಕರೂ ಮತ್ತು ಮುಂದುವರೆದ ವೈಜ್ಞಾನಿಕ ಸಂಶೋಧನೆಗಾಗಿ ಬೆಂಗಳೂರಿನಲ್ಲಿ ಇರುವ ಜವಾಹರಲಾಲ್ ನೆಹರು ಕೇಂದ್ರದ () ಇಂಜಿನಿಯರಿಂಗ್ ಮೆಕ್ಯಾನಿಕ್ಸ್ ಘಟಕದ ಅಧ್ಯಕ್ಷರೂ ಆಗಿದ್ದರು. ಅವರು JNCASRನಲ್ಲಿ ಗೌರವ ಪ್ರಾಧ್ಯಾಪಕರೂ ಹಾಗೂ ಹೈದರಾಬಾದ್ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ಇಂಜಿನಿಯರಿಂಗ್ ಪ್ರಾಟ್ & ವಿಟ್ನೆ ಪೀಠಾಧ್ಯಕ್ಷರೂ ಆಗಿದ್ದರು. == ಪ್ರಶಸ್ತಿ, ಪುರಸ್ಕಾರಗಳು == ೨೦೧೩ರಲ್ಲಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣ ಭಟ್ನಾಗರ್ ಪ್ರಶಸ್ತಿ(1976), ರಾಜ್ಯೋತ್ಸವ ಪ್ರಶಸ್ತಿ (1986), ಪದ್ಮಭೂಷಣ (1987), ಶ್ರೀನಿವಾಸ ರಾಮಾನುಜನ್ ಪದಕ (1998), ಅಮೆರಿಕದ ಇನ್ಸ್‌ಟಿಟ್ಯೂಟ್ ಆಫ್ ಏರೋನಾಟಿಕ್ಸ್ ಮತ್ತು ಆಸ್ಟ್ರೋನಾಟಿಕ್ಸ್ ಕೊಡುವ ತರಲ ಬಲವಿಜ್ಞಾನ ಪ್ರಶಸ್ತಿ (2000), ಆರ್ಯಭಟ ಪ್ರಶಸ್ತಿ (2004), ಟ್ರಿಸ್ಟೆ ವಿಜ್ಞಾನ ಪುರಸ್ಕಾರ (2008), ಸರ್.ಎಂ.ವಿ. ರಾಜ್ಯ ಪ್ರಶಸ್ತಿ (2012), ಭಾರತೀಯ ವಿಜ್ಞಾನ ಸಂಸ್ಥೆಯ ವೈಮಾಂತರಿಕ್ಷ ವಿಭಾಗದ ಅಮೃತ ಮಹೋತ್ಸವದ ವಿಶಿಷ್ಟ ವಿಜ್ಞಾನ ಪ್ರಶಸ್ತಿ (2017) . ರೂರ್ಕಿ, ಬನಾರಸ್, ಗುಲಬರ್ಗಾ ವಿ.ವಿ.ಗಳಿಂದ ಗೌರವ ಡಾಕ್ಟರೇಟ್, ಶಾಂತಿನಿಕೇತನದಿಂದ ದೇಶಿಕೋತ್ತಮ ಗೌರವ == ಹೊರಗಿನ ಕೊಂಡಿಗಳು == ವೈಮಾಂತರಿಕ್ಷದ ಹೊಳೆಯುವ ತಾರೆ ಪ್ರೊ.ರೊದ್ದಂ, ಎಸ್. ಮಂಜುನಾಥ, ಪ್ರಜಾವಾಣಿ, ೧೬ ಡಿಸೆಂಬರ್ ೨೦೨೦ == ಉಲ್ಲೇಖಗಳು ==